About Founder
ಶ್ರೀಯುತ ನಾಗೇಶ್ ಕಾಮತ್
ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ನಮ್ಮ ಆಡಳಿತ ಸಂಚಾಲಕರಾದ ಶ್ರೀಯುತ ನಾಗೇಶ್ ಕಾಮತ್‌ರವರು ಎಂ.ಎ ಪದವಿಧರರಾಗಿದ್ದಾರೆ. ಹಿಂದಿ ವಿಷಯದಲ್ಲಿ ಎಂ.ಎಡ್ ಪದವಿಧರರಾಗಿರುವ ಇವರು ಅಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ ಮತ್ತು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಒಲವು ಹೊಂದಿರುವ ಇವರು ತಮ್ಮದೇ ಆದಂತಹ ಒಂದು ಶಾಲೆಯನ್ನು 2004 ರಲ್ಲಿ ಸ್ಥಾಪನೆ ಮಾಡಿದರು. ಸಂಸ್ಕಾರಯುತ ಮೌಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿರುವ, ಇವರ ಶಾಲೆ 28 ಮಕ್ಕಳಿಂದ ಪ್ರಾರಂಭಗೊಂಡು ಪ್ರಸ್ತುತ 300 ಮಕ್ಕಳು ರಾರಾಜಿಸುವಂತ ಶಾಲೆಯಾಗಿ ಹೊರಹೊಮ್ಮಿದೆ. ಸಮಾಜ-ಸೇವೆಯಲ್ಲಿಯು ಕೂಡ ತಮ್ಮನ್ನು ತೊಡಗಿಸಿಕೊಂಡಿರುವಂತ ವ್ಯಕ್ತಿ ಅನೇಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದರ ಮೂಲಕ ಎಷ್ಟೋ ಮಕ್ಕಳಿಗೆ ದಾರಿ-ದೀಪವಾಗಿದ್ದಾರೆ. “ತುಂಬಿದ ಕೊಡ ತುಳುಕುವುದಿಲ್ಲ”ಎನ್ನುವಂತೆ, ಎಲ್ಲೂ ಕೂಡ ಪ್ರಚಾರದತ್ತ ನಿರೀಕ್ಷೆ ಇಡದ ಇವರು, ಕೇವಲ ಶಿಕ್ಷಣ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದಂತಹ ಸಹಾಯ ಹಸ್ತ ನೀಡುವುದರ ಮೂಲಕ “ಬಡವರ-ಬಂಧು” ಎಂದು ಕರೆಯಿಸಿಕೊಳ್ಳುವಂತ ವ್ಯಕ್ತಿತ್ವ ಇವರದ್ದು. ಇವರು ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತಮ್ಮದೇ ಆದಂತಹ ಹೆಸರನ್ನು ಮಾಡಿದ್ದಾರೆ. ಇವರ ಸಹಾಯ ಹಸ್ತ ಪಡೆದ ಎಷ್ಟೋ ಮನೆಗಳು ನೆಮ್ಮದಿಯ ಜೀವನ ನಡೆಸುದರ ಜೊತೆಗೆ ಅವರೆಲ್ಲರ ಮನ-ಮನೆಯಲ್ಲಿ ಹೆಸರಾಗಿರುವ ವ್ಯಕ್ತಿಯಾಗಿದ್ದಾರೆ. ಇವರ ಆಸೆ-ಆಸಕ್ತಿ ಮೂಲ ಉದ್ದೇಶ ತಮ್ಮ ಶ್ರೀರಾಮ ವಿದ್ಯಾಕೇಂದ್ರಕ್ಕೆ ಬರುವಂತಹ ಎಲ್ಲಾ ಮಕ್ಕಳ ಕಾಳಜಿ ಮತ್ತು ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಿ ಪ್ರತಿಯೊಂದು ಮಗುವು ಸರ್ವತೋಮುಖ ಬೆಳವಣೆಗೆ ಹೊಂದಬೇಕೆನ್ನುವುದೇ ಇವರ ಮನದಾಳದ ಆಸೆ.
History of School
ಶ್ರೀ ರಾಮ ವಿದ್ಯಾಕೇಂದ್ರ
ಪ್ರಕೃತಿಯ ಸುಂದರ ಮಡಿಲಿನ ಕಡಲ ತೀರದ ತಪ್ಪಲಿನಲ್ಲಿ ಸುಂದರ ಕಲಿಕಾ ವಾತಾವರಣವಾಗಿರುವ ಶ್ರೀರಾಮ ನಗರ ಕೋಡಿ ಎಂಬಲ್ಲಿ ನಮ್ಮ ಶ್ರೀರಾಮ ವಿದ್ಯಾಕೇಂದ್ರವನ್ನು ನೋಡಬಹುದು .
ಶ್ರೀರಾಮ ವಿದ್ಯಾಕೇಂದ್ರ ಎಂಬ ಸಂಸ್ಥೆ 2004 ರಲ್ಲಿ ಸ್ಥಾಪನೆಗೊಂಡಿದ್ದು , ಸಂಸ್ಕಾರಯುತ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ 28 ವಿದ್ಯಾರ್ಥಿಗಳಿಂದ ಪ್ರಾರಂಭವಾದ ನಮ್ಮ ಶ್ರೀರಾಮ ವಿದ್ಯಾಕೇಂದ್ರವು ಇದೀಗ 300ವಿದ್ಯಾರ್ಥಿಗಳನ್ನು ಒಳಗೊಂಡಿದೆ . ಪ್ರಸ್ತುತ ಸಾಲಿನಲ್ಲಿ ನಮ್ಮ ಶ್ರೀರಾಮ ವಿದ್ಯಾಕೇಂದ್ರವು ನರ್ಸರಿಯಿಂದ ಪ್ರಾರಂಭಗೊಂಡು ಪ್ರಾಥಮಿಕ , ಹಿರಿಯ ಪ್ರಾಥಮಿಕ ಮತ್ತು ಪ್ರೌಢವಿಭಾಗ (10 ನೇ) ತರಗತಿಯನ್ನು ಹೊಂದಿದೆ .
ಕಳೆದ 20 ವರ್ಷಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರಯುತ , ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನಮ್ಮ ಶ್ರೀರಾಮ ವಿದ್ಯಾಕೇಂದ್ರವು ನೀಡುತ್ತಿದೆ.
-
300+
Students
-
Quality
Teachers & Staff
-
100%
Quality Education
-
10+
School Bus
About School